ನನ್ನ ಈ ಮಧುಬನದಿ ಸುಳಿಯದೆ 2 ವರುಷಗಳೇ ಕಳೆದವು. ಅದು ಹೇಗೆ ಎರಡು ವರುಷಗಳು ಕಳೆದುಹೋದವೆಂದೇ ಅರಿಯೆನು. ಛೇ, ಬರೆಯಲಾಗುತ್ತಿಲ್ಲವಲ್ಲ ಎಂಬ ಬೇಸರ ಎರಡು ವರ್ಷಗಳಲ್ಲಿ ಅನೇಕ ಬಾರಿ ಆಗಿದ್ದೂ ಇದೆ. ಸಮಯ ಸಿಗಲಿಲ್ಲ ಎಂದರೆ ಹೆಚ್ಚಾದೀತು, ಬರೆಯಲು ಮನಸ್ಸು ಮಾಡಲಿಲ್ಲ ಎಂದರೂ... ಊಹೂಂ ಒಪ್ಪಲು ಮನಸ್ಸಾಗುತ್ತಿಲ್ಲ. ಒಟ್ಟಾರೆ ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ, ಅಷ್ಟೆ.
ಕಳೆದ ಎರಡು ವರುಷಗಳಿಂದ ದಿನಗಳು ಬಹಳ ಮುದ್ದು ಮುದ್ದಾಗಿ ಕಳೆಯುತ್ತಿವೆ. ಹಾಗೆಯೇ, ನಾನೆಲ್ಲಿ ಕಳೆದು ಹೋದೇನೋ ಎಂಬ ಭಯದಿಂದ ಮತ್ತೆ ಮೈಕೊಡವಿ ಕೂತಿದ್ದೇನೆ. ಈಗ್ಗೆ ನಾಲ್ಕೈದು ತಿಂಗಳಿಂದ ಮತ್ತೊಂದು ಬ್ಲಾಗನ್ನೂ ( http://radhika-mahesh.blogspot.com/ ) ಶುರುವಿಟ್ಟುಕೊಂಡಿದ್ದೇನೆ, ನನ್ನ ಬಾಳಗೆಳೆಯ ಮಹೇಶ್ ಜೊತೆಸೇರಿ. ಆಗೀಗೊಮ್ಮೆ ನಮ್ಮೆದುರು ಪ್ರತ್ಯಕ್ಷವಾಗುವ ಫ್ರೇಮುಗಳಿಗೇ ಬ್ಲಾಗು ರೂಪ ಕೊಡುವ ಪ್ರಯತ್ನವದು.
. . . ಹಾಗೆಂದು ಎರಡು ವರುಷಗಳಲ್ಲಿ ಬರೆಯಲೇ ಇಲ್ಲ ಎಂದಲ್ಲ, ಕಾರ್ಯನಿಮಿತ್ತ ಬರೆದಿದ್ದೇನೆ, ಬರೆಯುತ್ತಲೂ ಇದ್ದೇನೆ. ಆದರೆ ನನ್ನದೆಂದೇ ಇರುವ ಇಲ್ಲಿ ಬರೆದರೆ ಅದರಿಂದ ಸಿಗುವ ಸಂತೃಪ್ತಿ ಬೇರೆಯೇ ಬಿಡಿ. ಹಾಗಾಗಿ ಮತ್ತೆ ಮರಳಿದ್ದೇನೆ . . .
ರಾಧಿಕಾ
5 comments:
ಮತ್ತೆ ಬರೆಯಲು (ಬ್ಲಾಗ್‍ನಲ್ಲಿ) ಆರಂಭಿಸಿದ್ದು ಸಮ್ತೋಷದ ವಿಷಯ. ಈ ಬಾರಿ ನಿಲ್ಲಿಸಬೇಡಿ.
olleya saalugalu
bareyuttiri
ಧನ್ಯವಾದಗಳು ರಾಜೇಶ್, ಇಂಚರ :)ಖಂಡಿತ ಬರೆಯುತ್ತೇನೆ.
ರಾಧಿಕಾ
ಮತ್ತೆ ಬರಿ ಹುಡ್ಗಿ. ನಿನ್ನ ಪೈಂಟಿಂಗ್ ನೋಡಿ ಸುಮಾರು ವರ್ಷಗಳೇ ಆಯ್ತು. ಹಾ, ಈ ಫೋಟೋ ತುಂಬಾ ಚೆನ್ನಾಗಿದೆ
matte banni radhika. aagaaga nanna daamptya.blogspot.com bheeti kodi
Post a Comment