Tuesday, June 17, 2008

ಹನಿಯೊಂದಿಗೆ ಒಂದು ಕ್ಷಣ...

ಮೊನ್ನೆ ಮೊನ್ನೆ ಆಗಸದಿಂದ
ನೇರ ನನ್ನ ಅಂಗೈಗೇ
ಹನಿಯೊಂದು ಫಳಕ್ಕನೆ
ಬಿದ್ದು, ಅತ್ತಿತ್ತ ಕತ್ತು ತಿರುಗಿಸಿ
ನನ್ನನ್ನೇ ಕಣ್ಣು ಬಿಟ್ಟು ನೋಡಿತ್ತು.

ಹನಿಗೋ ಉಭಯ ಸಂಕಟ
ಬಿದ್ದದ್ದು ನೆಲಕ್ಕಲ್ಲ, ತ್ರಿಶಂಕು ಸ್ವರ್ಗಕ್ಕೆ
ಕಣ್ಣರಳಿಸಿ ಅತ್ತಿತ್ತ ನೋಡಿತ್ತು,
ನನ್ನ ಅಂಗೈಯ ಹತ್ತು ದಾರಿಗಳಲ್ಲಿ
ಕಾಲು ಬಿಡಿಸಿ ನೋಡುತ್ತಾ ಓಲಾಡುತ್ತಿತ್ತು.

ಹನಿಗೋ ನೆಲಮುಟ್ಟುವಾಸೆ
ನನಗೋ ಅಂಗೈಲೇ ಜೋಗ
ಹನಿಯೊಂದು
ಧಾರೆ ಹಲವು
ಎಲ್ಲಿ ಸಿಗಬೇಕು ಇಂಥ ಪುಳಕ?

ನನ್ನ ಕಣ್ಣ ಕೊಳವೋ
ಪ್ರತಿದಿನವೂ ಮಂಜುಗಡ್ಡೆ
ಎಂದು ಹನಿದೀತು ಎಂದು
ಕಾಯುತ್ತಲೇ ಮೈಬಿಸಿ, ಕಣ್ಚಳಿ
ಆದರೆಲ್ಲಿ ಕರಗೀತು ಹೇಳಿ?

9 comments:

ಪ್ರಿಯಾ ಕೆರ್ವಾಶೆ said...

putta haniyantha kavite...chennagide

VENU VINOD said...

ಹನಿಗೋ ನೆಲಮುಟ್ಟುವಾಸೆ
ನನಗೋ ಅಂಗೈಲೇ ಜೋಗ
ಹನಿಯೊಂದು
ಧಾರೆ ಹಲವು
ಎಲ್ಲಿ ಸಿಗಬೇಕು ಇಂಥ ಪುಳಕ?

nice lines....

ರಾಜೇಶ್ ನಾಯ್ಕ said...

ವೇಣುಗೆ ಇಷ್ಟವಾದ ಚರಣವೇ ನನಗೂ ಬಹಳ ಹಿಡಿಸಿತು.

ಕಾರ್ತಿಕ್ ಪರಾಡ್ಕರ್ said...

ಹನಿ ಕಹಾನಿ ಚೆನ್ನಾಗಿದೆ. ಇಂತಹ ಹನಿ ಕವಿತೆಗಳು ಸೇರಿ ಮಧುಬನ ತೊಯ್ದು ತಂಪಾಗಲಿ.

Anonymous said...

kavithe chennagide.
baraha Innoo.
photo haake maraaythee. kottiddu thanage bachchittaddu pararige nenpirali
-jogi

ರಾಧಿಕಾ ವಿಟ್ಲ said...

ಸುಮ್ಮನೆ ಗೀಚಿದ ಪುಟ್ಟ ಹನಿಗೆ ಪ್ರತಿಕ್ರಿಯೆ ನೀಡಿದ್ದು ಕಂಡು ನಿಜಕ್ಕೂ ಆಶ್ಚರ್ಯ ನನಗೆ. ವೇಣು, ರಾಜೇಶ್‌ ನಾಯ್ಕ, ಗೆಳತಿ ಪ್ರಿಯ, ಕಾರ್ತಿಕ್‌, ಜೋಗಿ ಎಲ್ಲರಿಗೂ ಧನ್ಯವಾದ.
- ಪ್ರೀತಿಯಿಂದ ರಾಧಿಕಾ.

ಆಲಾಪಿನಿ said...

hey radhike... haniya kavana haniyshte sogasaagide. gud luck...

Anonymous said...

ಪದ್ಯನೂ..
ಗುಡ್

ಮಧುಬನ ಕರೆದರೆ, ತನುಮನ ಸೆಳೆದರೆ, ಶರಣಾಗು ಆದರೆ...

ಕನಸು said...

ರಾಧಾ ಮೇಡಂ,
ನಮಸ್ಕಾರಗಳು
ನಿಮ್ಮ ಹನಿಯೋಂದಿಗೆ ಒಂದು ಕ್ಷಣ
ಕವಿತೆ ಅದ್ಭುತವಾಗಿದೆ
ಅಭಿನಂದನೆಗಳು
-ಕನಸು
ಬೆಳಗಾವಿ